Learning Deatails

About Learning

IntraDay ಟ್ರೇಡಿಂಗ್ ಅಂದರೆ ಒಬ್ಬ ವ್ಯಕ್ತಿ Stock Market ಅವಧಿಯೊಳಗೆ ಸ್ಟಾಕನ್ನು ಒಂದೇ ದಿನದಲ್ಲಿ ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆಯಾಗಿದೆ. ವ್ಯಾಪಾರವೂ ಯಾವ ಮಾರುಕಟ್ಟೆಯಲ್ಲಿ ಬೇಕಾದರು ನಡೆಯಬಹುದು. ಆದರೆ ಸ್ಟಾಕ್ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಅಂದರೆ ಮಾರುಕಟ್ಟೆ ದಿನದ ವಹಿವಾಟು ಮುಕ್ತಾಯಗೊಳ್ಳುವುದರೊಳಗೆ ಮುಗಿಯುವ ಪ್ರಕ್ರಿಯೆಯಾಗಿರುತ್ತದೆ. ವಹಿವಾಟುಗಳು ಷೇರುಗಳ ಮಾಲೀಕತ್ವದ ಬದಲಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಇನ್ಟ್ರಾ ಡೇ ಟ್ರೇಡಿಂಗ್​​ ಅನ್ನು ಡೇ ಟ್ರೇಡಿಂಗ್ ಎಂದೂ ಸಹ ಕರೆಯಲಾಗುತ್ತದೆ. ರಿಸ್ಕ್ತೆಗೆದುಕೊಳ್ಳಲು ಸಿದ್ಧವಿರುವವರಿಗೆ, ಮಾರುಕಟ್ಟೆಯ ಬೆಳವಣಿಗೆಗಳನ್ನು ಕೂಲಂಕುಷವಾಗಿ ಗಮನಿಸಲು ಸಮಯವಿರುವವರಿಗೆ ಹೊಂದುವ ಟ್ರೇಡಿಂಗ್ ಇದಾಗಿರುತ್ತದೆ.

ಇಂಟ್ರಾಡೇ ಟ್ರೇಡಿಂಗ್ ವಹಿವಾಟನ್ನು ಸ್ಟಾಕ್ ಮಾರುಕಟ್ಟೆ Open ಆದ ನಂತರ ಅಂದರೆ ಮುಂಜಾನೆ 9:15 ನಂತರ ಪ್ರಾರಂಭಿಸಬೇಕು ಮತ್ತು ಸ್ಟಾಕ್ ಮಾರುಕಟ್ಟೆ Close ಆಗುವ ಮೊದಲು ಅಂದರೆ 3:15 ರ ಒಳಗಡೆ ಮುಕ್ತಾಯಗೊಳಿಸಬೇಕು.

Intraday ಟ್ರೇಡಿಂಗ್ ಅಲ್ಲಿ Leverage ಸಿಗುತ್ತದೆ.ಉದಾಹರಣೆಗೆ.ಒಂದು ಷೆರಿನ ಬೆಲೆ Rs.100 ಇದೆ ಎಂದಿಟ್ಟುಕೊಳ್ಳಿ . ಷೆರನ್ನು Intraday ಟ್ರೇಡಿಂಗ್ ಅಲ್ಲಿ ನೀವು ಕೇವಲ 20 ರೂಪಾಯಿಗಳಿಂದ Buy ಅಥವಾ Sell ಮಾಡಬಹುದು.


Time :

8 Mins